“We cannot always build the future for youth, but we can build our youth for the future”
The prestigious, K.P.E.S’s Dr. G. M. Patil Law College, Dharwad, since its inception in the year 1975 has made remarkable progress by imparting excellent and quality legal education. The Founder President Dr. G. M. Patil, started this institution with an aim to provide finest environment possible for teaching and learning. This institution believes in not only providing best legal education, but also there is a constant endeavour to instil in our students ethical values making them socially responsible citizens. The college campus has a State of Art infrastructure, rich library and computer lab and all facilities for the overall development of the students. The committed team believes in ‘Team work makes the dream work’ and always they strive to achieve the vision and mission of the institution. We believe in Swami Vivekananda’s quote which says:
“We want education by which character is formed, strength of mind is increased, the intellect is expanded, and by which one can stand one’s own feet.”
” ಯುವಕರಿಗಾಗಿ ಭವಿಷ್ಯ ನಿರ್ಮಿಸವುದು ನಮ್ಮಿಂದಾಗದಿದ್ದರೂ ಭವಿಷ್ಯಕ್ಕಾಗಿ ನಮ್ಮ ಯುವಕರನ್ನೆ ನಿರ್ಮಿಸಬಹುದಾಗಿದೆ.” ಎಂಬ ಧ್ಯೇಯದೊಂದಿಗೆ.
ಪ್ರತಿಷ್ಠಿತ ಕರ್ನಾಟಕ ಪ್ರಗತಿಶೀಲ ಶಿಕ್ಷಣ ಸಂಸ್ಥೆಯ ಡಾ|| ಜಿ. ಎಂ. ಪಾಟೀಲ ಕಾನೂನು ಮಹಾವಿದ್ಯಾಲಯವು ೧೯೭೫ ರ ಸಾಲಿನಲ್ಲಿ ಪ್ರಾರಂಭಗೊಂಡಾಗಿನಿಂದ, ಮೌಲ್ಯಾಧಾರಿತ ಮತ್ತು ಶ್ರೇಷ್ಠ ಮಟ್ಟದ ಕಾನೂನು ಶಿಕ್ಷಣವನ್ನು ನೀಡುವಲ್ಲಿ ಸಾಧಿಸಿದ ಪ್ರಗತಿಯು ಒಂದು ಮೈಲಿಗಲ್ಲಾಗಿದೆ. ಭೋದನೆ ಮತ್ತು ಕಲಿಕೆಯಲ್ಲಿ ಸಮರ್ಥನೀಯ ಮತ್ತು ಪರಿಶುದ್ಧ ವಾತಾವರಣವನ್ನು ಒದಗಿಸಿಕೊಡುವ ಗುರಿಯೊಂದಿಗೆ ಸಂಸ್ಥಾಪನಾ ಅಧ್ಯಕ್ಷರಾದ ಸನ್ಮಾನ್ಯ ದಿವಂಗತ ಡಾ||ಜಿ.ಎಂ. ಪಾಟೀಲರು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ಅತ್ಯುತ್ಯಮ ಕಾನೂನು ಶಿಕ್ಷಣ ಕೊಡುವದೊಂದೆ ಅಲ್ಲದೆ, ನಮ್ಮ ವಿದ್ಯಾರ್ಥಿಗಳಲ್ಲಿ ತಾತ್ವಿಕ, ನೈತಿಕ ಮೌಲ್ಯಗಳನ್ನು ಅಂತರ್ಗತಗೊಳಿಸಿ ಅವರನ್ನು ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರನ್ನಾಗಿಸುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ದಿಗಾಗಿ ಮಹಾವಿದ್ಯಾಲಯದ ವಾತಾವರಣವು ಕಲಾತ್ಮಕ ಕಟ್ಟಡ, ಸಮೃದ್ಧ ಗ್ರಂಥಾಲಯ ಮತ್ತು ಗಣಕೀಕೃತ ಪ್ರಯೋಗಾಲಯ ಹಾಗೂ ಇತರ ಅನುಕೂಲತೆ ಹೊಂದಿದೆ.
ಸಂಘರೂಪದ ಒಗ್ಗಟ್ಟಿನಿಂದ ಕಾರ್ಯವು ಕಲಾತ್ಮಕ ಕಾರ್ಯವನ್ನು ಸರಳವಾಗಿಸಬಹುದೆಂಬ ನಂಬಿಕೆ ಹೊಂದಿದ ವ್ಯವಸ್ಥಿತ ಕಾರ್ಯಪಡೆಯು ಸಂಸ್ಥೆಯ ದೃಷ್ಟಿಕೋನ ಮತ್ತು ದ್ಯೇಯಗಳನ್ನು ಸಾಧಿಸುವಲ್ಲಿ ಸದಾ ಶ್ರಮಿಸುತ್ತಿದೆ. ಈ ಕೆಳಗೆ ಕಾಣಿಸಿದ ವಿವೇಕಾನಂದರ ಉಲ್ಲೇಖನದಲ್ಲಿ ನಂಬಿಕೆ ಇಟ್ಟಿದ್ದೇವೆ.
“ಗುಣ ಮತ್ತು ನಡತೆಯನ್ನು ನಿರ್ಮಿಸುವ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ, ಚತುರತೆಯನ್ನು ವೃದ್ದಿಸುವ ಮತ್ತು ಯಾವುದರಿಂದ ಒಬ್ಬ ವ್ಯಕ್ತಿ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗುತ್ತದೆಯೊ ಅಂತಹ ಶಿಕ್ಷಣ ನಮಗೆ ಬೇಕಾಗಿದೆ.”